ಪ್ರುಡೆನ್ಸ್ ಶಾಲೆಯಲ್ಲಿ ಕರುನಾಡಿನ ಕಲಾಸಿರಿ ಅನಾವರಣ
೬೯ನೇ ಕನ್ನಡ ರಾಜ್ಯೋತ್ಸವವನ್ನು ವೈವಿಧ್ಯಮಯ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಶಾಲೆಯಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಬರ್ಣ ಚಟರ್ಜಿ, ಕನ್ನಡ ವಿಭಾಗದ ಮುಖಸ್ಥೆ ಶ್ರೀಮತಿ ಕೋಕಿಲ ಮತ್ತು ಹಿರಿಯ ಶಿಕ್ಷಕರಾದ ಶ್ರೀಮತಿ ಹೇಮಲತ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕನ್ನಡ ನಾಡುನುಡಿಯ ಮಹತ್ವವನ್ನು ತಿಳಿಸಿದರು. ಮಕ್ಕಳು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಜಾನಪದ ಕಲೆಗಳಾದ ಡೊಳ್ಳುಕುಣಿತ, ಕಂಸಾಳೆ, ಯಕ್ಷಗಾನ ಹಾಗೂ ಕನ್ನಡ ಗೀತೆಗಳು, ಪಾತ್ರಾಭಿನಯ, ಕಿರುನಾಟಕಗಳನ್ನು ತಮ್ಮ ಪ್ರತಿಭೆಯ ಮೂಲಕ ಪ್ರದರ್ಶಿಸಿ ಮನರಂಜಿಸಿದರು.