Activities

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ- 68ನೇ ಕನ್ನಡ ರಾಜ್ಯೋತ್ಸವವನ್ನು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ತುಮಕೂರು ಇನ್ಸ್ಟಿಟ್ಯೂಟ್ ಆಫ್ ಸಿನಿಮಾ ನಿದರ್ೇಶಕ ಶ್ರೀನಿವಾಸ್ಮೂತರ್ಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನ ಉದ್ಘಾಟಿಸಿ, ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿದೆ.ಇದರ ಸ್ವರೂಪವನ್ನು ತಿಳಿಯಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಸಮಯದ ಮಹತ್ವ ಅರಿತಿರ ಬೇಕೆಂದು ಕಿವಿಮಾತು ಹೇಳಿದರು. ರಾಜ್ಯೋತ್ಸವ ಪ್ರಯುಕ್ತ ನವೆಂಬರ್ 3 ರಂದು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯಕ್ಕೆ ಅನುಗುಣವಾಗಿ 'ನುಡಿಹಬ್ಬ' ಸ್ಪಧರ್ಗಳನ್ನು ನಡೆಸಲಾಯಿತು. ಪ್ರೊ: ರೇಣುಕಪ್ಪನವರು ಸ್ಪಧರ್ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ, ಸ್ಪಧರ್ ಚಟುವಟಿಕೆಗಳಿಂದ ವಿದ್ಯಾಥಿಗಳಿಗೆ ಸ್ಪಷ್ಟ ಉಚ್ಛರಣೆ, ಸೃಜನಶೀಲ ಬರವಣಿಗೆಯ ಮೂಲಕ ಭಾಷಾ ಕೌಶಲಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಸ್ಪಧರ್ ಜಗತ್ತಿನಲ್ಲಿ ಸಕ್ರಿಯವಾಗಿರ ಬೇಕೆಂದು ತಿಳಿಸಿದರು. ಜಾನಪದ ಕಲೆ, ನೃತ್ಯ, ಏಕಪಾತ್ರಾಭಿನಯ, ಕನ್ನಡ ನಾಡು ನುಡಿಗೆ ಸಂಬಂಧಿಸಿದ ಗೀತೆಗಳನ್ನು ಹಾಡುವುದರ ಮೂಲಕ ಕನ್ನಡಾಭಿಮಾನವನ್ನು ಪ್ರತಿಬಿಂಬಿಸಿದ ವಿದ್ಯಾರ್ಥಿಗಳಿಗೆ ರೂಪಾ ರುದ್ರೇಶ್ ಅಭಿನಂದಿಸಿದರು.

loader