ಪ್ರುಡೆನ್ಸ್ ಶಾಲೆಯಲ್ಲಿ ಕರುನಾಡಿನ ಕಲಾಸಿರಿ ಅನಾವರಣ
ಮೈಸೂರು ರಾಜ್ಯವು (ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನಾಗಿ ಘೋಷಣೆ ಮಾಡಿದ ನವೆಂಬರ್೧ರ ದಿನವನ್ನು ರಾಜ್ಯೋತ್ಸವವೆಂದು ಆಚರಿಸುತ್ತಾರೆ.
೬೯ನೇ ಕನ್ನಡ ರಾಜ್ಯೋತ್ಸವವನ್ನು ವೈವಿಧ್ಯಮಯ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಶಾಲೆಯಲ್ಲಿ ವಿಜೃಂಭಣೆಯಿAದ ಆಚರಿಸಲಾಯಿತು. ಡಾ:ನಾ.ಸೋಮೇಶ್ವರ್, (ಥಟ್ ಅಂತ ಹೇಳಿ?! ಕಾರ್ಯಕ್ರಮದ ನಿರೂಪಕರು) ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯ ಮಹತ್ವವನ್ನು ವಿವರಿಸಿದರು.
೬೯ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ೧೫, ೨೦೨೪ರಂದು ಮಾಂಟೆಸರಿ ಯಿಂದಾ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ನುಡಿಹಬ್ಬ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸ್ಪರ್ಧಾ ಚಟುವಟಿಕೆಗಳು ಮಕ್ಕಳ ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿದ್ದು, ಕಲಿಕಾರ್ಥಿಯ ಜ್ಞಾನ ಸಂವರ್ಧನೆ, ಸಂವಹನಶೀಲತೆ, ಕ್ರಿಯಾತ್ಮಕವಾಗಿ ಭಾಷೆಯ ಬಳಕೆ ಹಾಗೂ ಭಾಷಾ ಕೌಶಲಗಳ ಬಗ್ಗೆ ಹೆಚ್ಚು ಸಾಮರ್ಥ್ಯಗಳಿಸಲು ಸಹಕಾರಿಯಾಯಿತು ಎಂದು ಪ್ರೊ. ಜಿ.ಎಸ್. ರೇಣುಕಪ್ಪ ಶ್ಲಾಘಿಸಿದರು.